ಭಾರತೀಯ ಆರಂಭಿಕ ಸಂವಹನ ವ್ಯವಸ್ಥೆ

ಪತ್ರಿಕೋಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಕೋದ್ಯಮ ಅನಿವಾರ್ಯ. ಸಮಾಜವನ್ನು ನಿರ್ದಿಷ್ಟ ಪಥದತ್ತ ಕೊಂಡೊಯ್ಯುವಲ್ಲಿ ಪತ್ರಿಕೋದ್ಯಮ ಶ್ರಮಿಸುತ್ತಿದೆ. ಪ್ರಸ್ತುತ ಘಟಣೆಗಳನ್ನು ನಾಗರೀಕರಿಗೆ ತಲುಪಿಸಿ ಅವರನ್ನು ಎಚ್ಚರಿಸುವ ಕಾರ್ಯದಲ್ಲಿ ತೊಡಗಿದೆ. ವಸ್ತುನಿಷ್ಠ ವರದಿಗಳ ಮೂಲಕ ಸಮಾಜಿಕ ಸಮಸ್ಯಗಳ ನಿವಾರಣೆಗಾಗಿ ಹೋರಾಡುತ್ತಿದೆ. ಪ್ರಜೆಗಳಿಗೆ ನ್ಯಾಯ ಒದಗಿಸುವ ಅಸ್ತ್ರ ಪತ್ರಿಕೋದ್ಯಮವಾಗಿದೆ. ಯಾವುದೇ ರಾಜಕೀಯ ಚಟುವಟಿಕೆಗಳ ಅವನತಿ ಮತ್ತು ಯಶಸ್ಸು ಪತ್ರಿಕೋದ್ಯಮವನ್ನು ಅವಲಂಭಿಸಿದೆ. ಜನರಿಗೆ ಪ್ರಸ್ತುತ ಸಮಾಜದ ಗತಿಯನ್ನು ತಿಳಿಸಿ ತರ್ಕಬದ್ದವಾಗಿ ವಿಶ್ಲೇಷಿಸುವ ಸಾಮಥ್ರ್ಯವನ್ನು ಬೆಳೆಸುವಲ್ಲಿ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜಕ್ಕೆ ಜ್ಞಾನ, ಮಾಹಿತಿ, ಶಿಕ್ಷಣ ಮತ್ತು ಪ್ರಸ್ತುತ ಘಟಣೆಗಳನ್ನು ತಿಳಿಸುವ ಮಾಂತ್ರಿಕ ಶಕ್ತಿಯಾಗಿದೆ. ಪತ್ರಿಕೋದ್ಯಮ ಎಂದರೆ ಪತ್ರಕರ್ತರನ್ನು ಮರೆಯುವಂತಿಲ್ಲ. ತಮ್ಮದೇ ಆದ ವಸ್ತುನಿಷ್ಠ, ನಂಬಿಕಸ್ಥ, ನೇರ ಬರವಣಿಗೆಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ನಿಸ್ವಾರ್ಥ ಸೇವೆಯ ಮೂಲಕ ಪ್ರತಿಯೊಬ್ಬ ಪತ್ರಕರ್ತ ಸಮಾಜಿಕ ನ್ಯಾಯಕ್ಕಾಗಿ ದುಡಿಯತ್ತಿದ್ದಾನೆ. ತನ್ನದೇ ಆದ ಜೀವನವನ್ನೂ ತ್ಯಾಗ ...