ಪತ್ರಿಕೋಧ್ಯಮದ ಆಧ್ಯ ಪ್ರವರ್ತಕರು

ಮಹಾತ್ಮಾ ಗಾಂಧಿ Photo Courtesy:Web Source ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿ ಮಹಾತ್ಮ ಗಾಂಧಿ ಪತ್ರಿಕೆಗಳನ್ನು ಸ್ವತಂತ್ರ್ಯ ಹೋರಾಟಕ್ಕೆ ಅಸ್ತ್ರವನ್ನಾಗಿಕೊಂಡರು . ಗಾಂಧಿಜಿಯವರ ಪತ್ರಿಕಾ ವ್ಯವಸಾಯ ಆರಂಭವಾಗಿದ್ದು ದಕ್ಷಿಣ ಆಪ್ರಿಕಾದಿಂದ . ‘ ಇಂಡಿಯನ್ ಓಪಿನಿಯನ್ ’ ಪತ್ರಿಕೆಯನ್ನು 1904 ರಲ್ಲಿ ಪ್ರಾರಂಭಿಸಿದರು . ಈ ಪತ್ರಿಕೆ ದಕ್ಷಿಣ ಆಪ್ರಿಕಾದಿಂದಲೆ ಇಂಗ್ಲೀಷ್ , ತಮಿಳ್ ಮತ್ತು ಗುಜರಾತಿಯಲ್ಲಿ ಪ್ರಕಟವಾಗುತ್ತಿತ್ತು . ಅಹಿಂಸೆ ಮತ್ತು ಸತ್ಯಾಗ್ರಹದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶ ಇಂಡಿಯನ್ ಓಪಿನಿಯನ್ ದ್ದಾಗಿತ್ತು . ಯುವಕರಲ್ಲಿ ಸ್ವಾತಂತ್ರ್ಯ ಕಲ್ಪನೆ , ತಿಳುವಳಿಕೆ ಮೂಡಿಸುವ ಉದ್ದೇಶದಿಂದ ‘ ಯಂಗ್ ಇಂಡಿಯಾ ’ ಪತ್ರಿಕೆಯನ್ನು 1919 ರಲ್ಲಿ ಪ್ರಾರಂಭಿಸಿದರು . ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯನ್ನು ವಹಿಸಿಕೊಂಡಾಗ ಅದರ ಪ್ರಸರಣ ಸಂಖ್ಯೆ 1200 ಆಗಿತ್ತು . ಕೆಲವೆ ದಿನಗಳಲ್ಲಿ ಅದು 45,000 ಕ್ಕೆ ಏರಿತು . ಈ ಪತ್ರಿಕೆಯಲ್ಲಿ ಯಾವುದೇ ರೀತಿ ಜಾಹಿರಾತುಗಳಿಗೆ ಪ್ರಾಮುಖ್ಯತೆ ಇರಲಿಲ್ಲ . ಪತ್ರಿಕೆ ಸ್ವಾ...