ಪತ್ರಿಕೋಧ್ಯಮದ ಆಧ್ಯ ಪ್ರವರ್ತಕರು
ಮಹಾತ್ಮಾ ಗಾಂಧಿ
![]() |
Photo Courtesy:Web Source |
ಯುವಕರಲ್ಲಿ ಸ್ವಾತಂತ್ರ್ಯ ಕಲ್ಪನೆ, ತಿಳುವಳಿಕೆ ಮೂಡಿಸುವ
ಉದ್ದೇಶದಿಂದ ‘ಯಂಗ್ ಇಂಡಿಯಾ’ ಪತ್ರಿಕೆಯನ್ನು
1919ರಲ್ಲಿ ಪ್ರಾರಂಭಿಸಿದರು. ಗಾಂಧೀಜಿಯವರು
ಯಂಗ್ ಇಂಡಿಯಾ ಪತ್ರಿಕೆಯನ್ನು ವಹಿಸಿಕೊಂಡಾಗ
ಅದರ ಪ್ರಸರಣ ಸಂಖ್ಯೆ 1200 ಆಗಿತ್ತು. ಕೆಲವೆ
ದಿನಗಳಲ್ಲಿ ಅದು 45,000ಕ್ಕೆ ಏರಿತು. ಈ ಪತ್ರಿಕೆಯಲ್ಲಿ ಯಾವುದೇ
ರೀತಿ ಜಾಹಿರಾತುಗಳಿಗೆ ಪ್ರಾಮುಖ್ಯತೆ ಇರಲಿಲ್ಲ. ಪತ್ರಿಕೆ
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಗಾಂಧೀಜಿ ಕೂಡಾ ಒಬ್ಬರು. 1921ರ
ಡಿಸೆಂಬರ್ ಸಂಚಿಕೆಯಲ್ಲಿ “A Puzzle & Its Solution” (ಒಗಟು ಮತ್ತು ಅದಕ್ಕೆ
ಪರಿಹಾರ) ಎನ್ನುವ ಲೇಖನವನ್ನು ಬರೆದರು. ಈ
ಮೂಲಕ “ಸರ್ಕಾರವನ್ನು ಉರುಳಿಸುವುದು ನಮ್ಮ ಅಭಿಲಾಸೆ, ಜನರ
ಇಚ್ಚೆಗೆ ಸರ್ಕಾರ ತಲೆ ಬಾಗಲೇಬೇಕೆಂದು
ನಮ್ಮ ಬಯಕೆ” ಎಂದು ಒತ್ತಿ
ಹೇಳಿದರು. 1922ರಲ್ಲಿ
“ಯಂಗ್ ಇಂಡಿಯಾ”ದ ಪೆಬ್ರುವರಿ
ಸಂಚಿಕೆಯಲ್ಲಿ “Shaking the Mean” ಎಂಬ ಲೇಖನದಲ್ಲಿ
ಬ್ರಿಟಿಷ ಸರ್ಕಾರವನ್ನು ಉಗ್ರವಾಗಿ ಖಂಡಿಸಿದ್ದರು. ಅದರ
ಪರಿಣಾಮವಾಗಿ 6 ವರ್ಷಗಳ ಕಾಲ ಸೆರೆಮನೆ
ವಾಸ ಅನುಭವಿಸಬೇಕಾಯಿತು. ‘ನವಜೀವನ್’, ಈ ಪತ್ರಿಕೆಯನ್ನು ವಾರಕೊಮ್ಮೆ
ಪ್ರಕಟಿಸಲಾಯಿತು. ಈ
ಮುಂಚೆ ಇದು ಮಾಸಿಕ ಪತ್ರಿಕೆಯಾಗಿತ್ತು.
![]() |
Photo Courtesy:Web Source |
1932ರಲ್ಲಿ ಜೈಲಿನಲ್ಲಿದ್ದುಕೊಂಡೆ
ಗಾಂಧಿಜಿರವರು ‘ಹರಿಜನ್’ ಪತ್ರಿಕೆಯನ್ನು ಪ್ರಾರಂಭಿಸಿದರು. ಅಸ್ಪøಶ್ಯತೆಯ ವಿರುದ್ದ ಹೋರಾಡುವುದು
ಈ ಪತ್ರಿಕೆಯ ಪ್ರಮುಖ
ಉದ್ದೇಶವಾಗಿತ್ತು. ಹರಿಜನ
ಮತ್ತು ದೀನ-ದಲಿತರಿಗೆ ದೇವಾಲಯದಲ್ಲಿ
ಪ್ರವೇಶ ನೀಷೇಧ ಅಮಾನವೀಯ ಎಂದು
ಹೋರಾಟ ನಡೆಸಿದ ಪತ್ರಿಕೆ ಇದಾಗಿದೆ. ಈ
ಪತ್ರಿಕೆ ಆಗಿನ ಕಾಲಕ್ಕೆ ‘ಜನಸಾಮಾನ್ಯರ
ಭಗವದ್ಗೀತೆ’ ಆಗಿತ್ತು. ಪತ್ರಿಕೆಗಳು
ಮತ್ತು ವಾರ್ತಾ ಸಂಸ್ಥೆಗಳಿಗೆ ಹರಿಜನ್
ಪತ್ರಿಕೆ ಪ್ರಮುಖ ಸುದ್ದಿಯ ಮೂಲವಾಗಿತ್ತು. ಈ
ಪತ್ರಿಕೆಯಲ್ಲಿ ಪ್ರಕಟವಾದ ಗಾಂಧಿಜಿಯವರ ಅಂಕಣಗಳನ್ನು ಅನುವಾಧಿಸಿ ಪ್ರಾಧೇಶಿಕ ಪತ್ರಿಕೆಗಳು ಪ್ರಕಟಿಸುತ್ತಿದ್ದವು.
ಗಾಂಧೀಜಿಯವರು
ಜೈಲಿನಲ್ಲಿದ್ದಾಗ ಈ ಎರಡೂ ಪತ್ರಿಕೆಗಳನ್ನು
ಸಿ.ರಾಜಗೋಪಾಲಾಚಾರಿ ಮತ್ತು ಪೋತನ್ ಜೋಸೆಪ್
ನಡೆಸುತ್ತಿದ್ದರು. 1919-1947ರವರೆಗೆ
ಗಾಂಧೀಜಿರವರ ಅಂಕಣಗಳೆ ಭಾರತೀಯ ಎಲ್ಲಾ
ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. 1920-1936ರವರೆಗೆ
ಬ್ರಿಟಿಷ ಸರ್ಕಾರದ ವಿರುದ್ದ ಹಲವಾರು
ಆಂದೋಲನಗಳನ್ನು ಮಾಡಿದರು. ಅವುಗಳಲ್ಲಿ
ಭಾರತ ಬಿಟ್ಟು ತೊಲಗಿ(ಕ್ವಿಟ್
ಇಂಡಿಯಾ) ಮತ್ತು ಉಪ್ಪಿನ ಸತ್ಯಾಗ್ರಹ
ಆಂದೋಲನಗಳಿಗೆ ಸಂಬಂಧಿಸಿದಂತೆ ಹಲವಾರು ಅಂಕಣಗಳನ್ನು ಪ್ರಕಟಿಸಿದರು. ಯುವಕರಿಗೆ
ಹೋರಾಟಕ್ಕೆ ಕರೆಕೊಟ್ಟರು.
ಗಾಂಧೀಜಿಯವರು
ತಮ್ಮ ವಿಚಾರ, ತತ್ವಗಳನ್ನು ಭಾರತೀಯರಿಗೆ
ತಿಳಿಸಲು ಸ್ವಾತಂತ್ರ್ಯಕ್ಕಾಗಿ ಯುವಕರಲ್ಲಿ ತಿಳುವಳಿಕೆ ಮೂಡಿಸಲು, ಸಮಾನತೆ ನಿರ್ಮಾನಕ್ಕಾಗಿ ಪತ್ರಿಕೆಯನ್ನು
ಆಯುಧವಾಗಿ ಬಳಸಿದರು.
ರಾಜಾರಾಂ
ಮೋಹನ್ರಾಯ್
![]() |
Photo Courtesy:Web Source |
ನೆಹರೂರವರು
ರಾಯ್ರನ್ನು “ಭಾರತೀಯ ಪತ್ರಿಕೋದ್ಯಮದ
ಪಿತಾಮಹ” ಎಂದಿದ್ದಾರೆ. ರಾಜಾರಾಂ
ಮೋಹನ್ರಾಯ್ರು ಸಾಮಾಜೀಕ
ಮತ್ತು ಧಾರ್ಮಿಕ ಸುಧಾರಣೆಗಾಗಿ ಹೋರಾಡಿದ
ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಬ್ರಹ್ಮೋ
ಸಮಾಜದ ಸ್ಥಾಪಕ ಮತ್ತು ಬೆಂಗಾಲ್
ಪುನರುಜ್ಜೀವನದ ಜನಕ ಎಂದು ಪ್ರಖ್ಯಾತಿಯನ್ನು
ಪಡೆದವರು ರಾಯರು. ರಾಜಾರಾಂ
ಮೋಹನ್ರಾಯ್ರು ಬೆಂಗಾಲಿಯಲ್ಲಿ
‘ಸಂಬಾದ ಕೌಮುದಿ’ ಎಂಬ ವಾರಪತ್ರಿಕೆಯನ್ನು
1821ರಲ್ಲಿ ಪ್ರಾರಂಭಿಸಿದರು. ಈ
ಶಿರ್ಷಿಕೆಯ ಇಂಗ್ಲೀಷ್ನ ಅನುವಾದ ‘ಮೂನ್
ಆಫ್ ಇಂಟಲಿಜೆನ್ಸ್’ಗೆ ಸಮನಾಗಿದ್ದು, ಇದರ
ಅರ್ಥ ‘ಚಾತುರ್ಯದ ಆಕಾಶ’ ಎಂದಾಗುತ್ತದೆ.
ಈ ಪತ್ರಿಕೆ ಕೋಲ್ಕತ್ತಾದಿಂದ ಪ್ರಕಟವಾಗುತ್ತಿತ್ತು. ಭಾರತೀಯರಿಂದ
ಸಂಸ್ಥಾಪಿತವಾದ ಮತ್ತು ಸಂಪಾಧನೆಯ ಜವಾಬ್ದಾರಿಯನ್ನು
ಭಾರತೀಯರು ಹೊಂದಿದ ಪ್ರಥಮ ಭಾರತೀಯ
ಭಾಷಾ ಪತ್ರಿಕೆ ಇದಾಗಿತ್ತು. ಆ ಕಾರಣದಿಂದ ಈ
ಪತ್ರಿಕೆಯನ್ನು ಭಾರತದ ಪ್ರಪ್ರಥಮ ಪ್ರಾದೇಶಿಕ
ಭಾಷಾ ಪತ್ರಿಕೆ ಎಂದು ಕರೆಯಲಾಗುತ್ತದೆ. ಪ್ರಥಮ
ಪ್ರಕಟಣೆ ಡಿಸೆಂಬರ್ 4, 1821. ಬಬಾನಿ
ಚರಣ ಬಂಡೊಪಾಧ್ಯಾಯ ಇದರ ಪ್ರಪ್ರಥಮ ಸಂಪಾದಕರಾಗಿದ್ದರು. ಆರ್ಥಿಕ
ತೊಂದರೆಯಿಂದಾಗಿ ಈ ಪತ್ರಿಕೆಯನ್ನು 1836ರಲ್ಲಿ
ಸ್ಥಗಿತಗೊಳಿಸಬೇಕಾಯಿತು.
ರಾಯರಿಗೆ ಬೆಂಗಾಲಿ, ಸಂಸ್ಕøತ, ಪರ್ಷಿಯನ್, ಅರೇಬಿಕ್
ಮತ್ತು ಇಂಗ್ಲಿಷ್ ಇನ್ನೂ ಹಲವಾರು ಭಾಷೆಗಳಲ್ಲಿ
ಪರಿಣಿತಿಯನ್ನು ಹೊಂದಿದ್ದರು. ಆ
ಕಾರಣ ಮೊಹನ್ರಾಯ್ರು
ಪರ್ಷಿಯನ್ ಭಾಷೆಯಲ್ಲಿ ‘ಮಿರತ್-ಉಲ್-ಅಕ್ಬರ್’
ಎಂಬ ಸುದ್ದಿ ನಿಯತಕಾಲಿಕೆಯನ್ನು ಪ್ರಾರಂಭಿಸಿದರು. ಮಿರತ್-ಉಲ್-ಅಕ್ಬರ್ನ
ಇಂಗ್ಲೀಷ್ ಅನುವಾದ ‘ಮಿರರ್ ಆಫ್
ನ್ಯೂಸ್’ ಎಂದಾಗುತ್ತದೆ. ಅಂದರೆ,
ಸುದ್ದಿಗಳ ಪ್ರತಿಬಿಂಬ ಅರ್ಥವನ್ನು ಪತ್ರಿಕೆಯ ಶಿರ್ಷಿಕೆಯಲ್ಲಿ ಕಾಣಬಹುದು. ಇದರ
ಸಂಸ್ಥಾಪಕರು ಮತ್ತು ಸಂಪಾದಕರು ರಾಯ್ರೆ ಆಗಿದ್ದರು. ಇದು 12 ಎಪ್ರಿಲ್, 1822 ರಲ್ಲಿ
ಪ್ರಪ್ರಥಮ ಸಂಚಿಕೆಯನ್ನು ಪ್ರಕಟಿಸಿತು. ಪ್ರತಿ
ಶುಕ್ರವಾರ ಪ್ರಕಟವಾಗುವ ವಾರಪತ್ರಿಕೆ ಇದಾಗಿತ್ತು. 4 ಎಪ್ರಿಲ್,
1823 ರಂದು ಸ್ಥಗಿತಗೊಂಡಿತು. 1823ರಲ್ಲಿ
ಜೇಮ್ಸ್ ಸಿಲ್ಕ್ ಬಕ್ಕಿಂಗ್ ಹ್ಯಾಂ
ರನ್ನು ಗಡಿಪಾರು ಮಾಡಿದ್ದನ್ನು ರಾಯರು
ತೀವ್ರವಾಗಿ ಖಂಡಿಸಿದ್ದರು. ಭಾರತೀಯರಲ್ಲಿ
ಜಾಗೃತಿಯನ್ನು ಮೂಡಿಸುವುದು ಇವರ ಪತ್ರಿಕೆಗಳ ಮೂಲ
ಉದ್ದೇಶವಾಗಿತ್ತು. ಪತ್ರಿಕಾ
ಮಾಧ್ಯಮವನ್ನು ಸಮಾಜ ಸುಧಾರಣೆಗಾಗಿ ಒಂದು
ಪ್ರಭಲ ಅಸ್ತ್ರವಾಗಿ ಬಳಸಿಕೊಂಡವರು ರಾಯರು.
ಜೇಮ್ಸ್
ಸಿಲ್ಕ್
ಬಕ್ಕಿಂಗ್
ಹ್ಯಾಂ
![]() |
Photo Courtesy:Web Source |
ಈತ
ಇಂಗ್ಲೇಂಡ್ನ ಕಾರ್ನ್ವಾಲ್ನ ಲೇಖಕ, ಪತ್ರಿಕೋದ್ಯಮಿ
ಮತ್ತು ಪ್ರವಾಸಿಗ. ಭಾರತೀಯ
ಪತ್ರಿಕೋದ್ಯಮದಲ್ಲಿ ಹೊಸ ಬೇಳಕು ಚೆಲ್ಲಿದ
ವ್ಯಕ್ತಿ. ವಿದೇಶಿಗನಾದರೂ
ಭಾರತೀಯ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ
ದನಿ ಎತ್ತಿದ ವ್ಯಕ್ತಿ. ಭಾರತದಲ್ಲಿ ಪ್ರಪ್ರಥಮವಾಗಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ
ಮಾತನಾಡಿದಕ್ಕಾಗಿ ನೆಹರೂರವರು ಜೇಮ್ಸ್ ಸಿಲ್ಕ್ ಬಕ್ಕಿಂಗ್
ಹ್ಯಾಂನನ್ನು “ಭಾರತೀಯ ಪತ್ರಿಕಾ ಸ್ವಾತಂತ್ರ್ಯದ
ಹರಿಕಾರ” ಎಂದು ವರ್ಣಿಸಿದ್ದಾರೆ.
ಬಕ್ಕಿಂಗ್ ಹ್ಯಾಂ 1818ರಲ್ಲಿ ಭಾರತಕ್ಕೆ ಬಂದ.
ಅದೇ ವರ್ಷದಲ್ಲಿ ‘ಕಲ್ಕತ್ತಾ ಕ್ರಾನಿಕಲ್’ ಪತ್ರಿಕೆಯ ಸಂಪಾದಕನಾದನು. ಕಲ್ಕತ್ತಾದ
ಕೆಲವು ವಾಣಿಜ್ಯೊದ್ಯಮಿಗಳು ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಈ
ಪತ್ರಿಕೆಯ ಮೂಲಕ ರಾಜಕೀಯ, ವಾಣಿಜ್ಯ
ಮತ್ತು ಸಾಂಸ್ಕøತಿಕ ಅಂಶಗಳನ್ನು
ಜನರಿಗೆ ತಿಳಿಸುವುದು ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು.
ಹ್ಯಾಂರು ಪತ್ರಿಕೆಯ ಮೂಲಕ ಸತಿ ಪದ್ದತಿ,
ವಿದವಾ ವಿವಾಹ ಮೊದಲಾದ ಸಮಾಜದ
ಅನಿಷ್ಠಗಳನ್ನು ಟೀಕಿಸಿ ಬರೆಯುತ್ತಿದ್ದರು.
ಈ ಪತ್ರಿಕೆ 15 ದಿನಗಳಿಗೊಮ್ಮೆ ಪ್ರಕಟವಾಗುವ 8 ಪುಟಗಳ ಪತ್ರಿಕೆಯಾಗಿತ್ತು.
ಹ್ಯಾಂರ ನೇರ
ಮತ್ತು ನಿರ್ಬಿತ ಭಾವದ ಅಂಕಣಗಳಿಂದ
ಸರ್ಕಾರ 1823ರಲ್ಲಿ ಹ್ಯಾಂ ರನ್ನು
ಗಡಿಪಾರು ಮಾಡಿತು. ಈ
ಜೇಮ್ಸ್ ಸಿಲ್ಕ್ ಬಕ್ಕಿಂಗ್ ಹ್ಯಾಂ
ರ ಗಡಿಪಾರನ್ನು ರಾಜಾರಾಂ
ಮೋಹನ್ರಾಯ್ರು ವಿರೋಧಿಸಿದರು. ಬಕ್ಕಿಂಗ್
ಹ್ಯಾಂರು ಸರ್ಕಾರದ ಯಾವುದೇ ತಂತ್ರಗಳಿಗೆ
ಹೆದರದೆ ಸೆರೆಮನೆಯಲ್ಲಿದ್ದುಕೊಂಡೆ ಜನಪರವಾದ ಲೇಖನಗಳನ್ನು ಮುಂದುವರೆಸಿದರು. ಪತ್ರಿಕೆಗಳಲ್ಲಿ
ಸಾರ್ವಜನಿಕ ವಿಷಯಗಳ ಚರ್ಚೆಯಾಗಬೇಕೆಂದು ಒತ್ತಿ
ಹೇಳಿದ ವ್ಯಕ್ತಿ ಎಂದರೇ ಜೇಮ್ಸ್
ಸಿಲ್ಕ್ ಬಕ್ಕಿಂಗ್ ಹ್ಯಾಂ.
ಹ್ಯಾಂ
ರು ಬ್ರಿಟೀಷ್ ಸರ್ಕಾರದಲ್ಲಿನ ಬ್ರಷ್ಟಾಚಾರ ಮತ್ತು ಅಧಿಕಾರಿಗಳ ದುರಾಚಾರವನ್ನು
ಕುರಿತು ಬರೆದ ಲೇಖನಗಳ ಪರಿಣಾಮವಾಗಿ
ಕ್ರಿಮಿನಲ್ ಆರೋಪ ಹೋರಿಸಿ ದೇಶ
ದ್ರೋಹಿ ಎಂದು ಹ್ಯಾಂರನ್ನು ಗಡಿಪಾರು
ಮಾಡಲಾಯಿತು.
ಬೆಂಜಮಿನ್
ಹಾರ್ನಿಮನ್
![]() |
Photo Courtesy:Web Source |
ಭಾರತೀಯ
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತವನ್ನು ಬೆಂಬಲಿಸಿದ್ದ ಬ್ರಿಟೀಷ್ ಪ್ರಜೆ ಎಂದರೆ ಈ
ಬೆಂಜಮಿನ್ ಹಾರ್ನಿಮನ್. ಇಂಗ್ಲೆಂಡ್ನಿಂದ 1906ರಲ್ಲಿ ‘ದಿ ಸ್ಟೇಟ್ಸಮನ್’
ಪತ್ರಿಕೆಯ ಸಂಪಾದಕನಾಗಿ ಭಾರತಕ್ಕೆ ಬಂದನು. 1913ರಲ್ಲಿ
ಕಲ್ಕತ್ತಾದ ‘ಪಿರೋಜ್ ಷಾ ಮೆಹ್ತಾ’ರವರ ‘ಬಾಂಬೆ ಕ್ರಾನಿಕಲ್’
ಪತ್ರಿಕೆಯ ಸಂಪಾದಕನಾದನು. ಸಾಮಾನ್ಯ
ಭಾರತೀಯರ ಬೇಕು-ಬೇಡಗಳನ್ನು ಅರಿತಿದ್ದ
ಹಾರ್ನಿಮನ್ ತನ್ನ ಬಾಂಬೆ ಕ್ರಾನಿಕಲ್
ಪತ್ರಿಕೆಯ ಮೂಲಕ ಭಾರತೀಯರ ದನಿಯಾದ. 1919ರ
ಜಲಿಯನ್ ವಾಲಾಬಾಗ್ ದುರಂತದ ಅವದಿಯಲ್ಲಿ ಪಂಜಾಬಿ
ಮಹಿಳೆಯರ ಮೇಲೆ ಬ್ರಿಟೀಷ್ ಅಧಿಕಾರಿಗಳ
ದೌರ್ಜನ್ಯ-ಅತ್ಯಾಚಾರಗಳನ್ನು ಕ್ರೂರವಾಗಿ ಪ್ರಕಟಿಸಿದನು. ಈ
ಕಾರಣಕ್ಕಾಗಿ ಬೆಂಜಮಿನ್ ಹಾರ್ನಿಮನ್ರನ್ನು ಭಾರತದಿಂದ ಗಡಿಪಾರು
ಮಾಡಲಾಯಿತು. ಭಾರತದಿಂದ
ಗಡಿಪಾರಾಗಿದ್ದ ಹಾರ್ನಿಮನ್ ನಿಷೇದಾಘ್ಞೆಯನ್ನು ಉಲ್ಲಂಘಿಸಿ ಮತ್ತೆ 1926ರಲ್ಲಿ ಭಾರತಕ್ಕೆ ಬಂದನು. ಅದೇ
ವರ್ಷ ಅಂದರೆ 1926ರಲ್ಲಿ “ಸೆಂಟಿನಲ್” ಎಂಬ
ಪತ್ರಿಕೆಯನ್ನು ಪ್ರಾರಂಭಿಸಿ ಸಾಮಾಜಿಕ ಜಾಗೃತಿ ಮತ್ತು
ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದನು. 1959ರಲ್ಲಿ
ಈ ಪತ್ರಿಕೆ ಸ್ತಗಿತಗೊಂಡಿತು.
ಸ್ವಾಮಿನಾಥನ್
ಸದಾನಂದ
![]() |
Photo Courtesy:Web Source |
ಭಾರತೀಯ
ಪತ್ರಿಕೋದ್ಯಮದಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಸ್ವಾಮಿನಾಥನ್
ಸದಾನಂದ ಕೂಡಾ ಒಬ್ಬರು. ಸದಾನಂದ ಯಾವುದೇ ಪತ್ರಿಕೋದ್ಯಮ
ವಿದ್ಯಾಭ್ಯಾಸ ಮಾಡದೇ ಇದ್ದರೂ ತಮ್ಮ
ಸ್ವ ಕಲಿಕೆಯ ಮೂಲಕ ಪತ್ರಿಕೋದ್ಯಮವನ್ನು
ಅರ್ಥೈಸಿಕೊಂಡ ಪತ್ರಕರ್ತರು. ಮೂಲತಃ
ತಮಿಳುನಡಿನವರಾದ ಇವರು ಮುಂಬೈ ಇಂದ
1930ರಲ್ಲಿ ಇಂಗ್ಲೀಷನಲ್ಲಿ ಪ್ರೀ ಪ್ರೆಸ್ ಜರ್ನಲ್
ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಉಪ್ಪಿನ
ಸತ್ಯಾಗ್ರಗದ ಅವಧಿಯಲ್ಲಿ ಗಾಂಧೀಜಿರವರ ಸಂದೇಶಗಳನ್ನು ಮತ್ತು ಇತರ ವರದಿಗಳನ್ನು
ತಿಳಿಸುವಲ್ಲಿ ಇವರು ಪ್ರಮುಖ ಪಾತ್ರ
ವಹಿಸಿದ್ದರು. ಏಕೆಂದರೆ
ಸಾಮಾನ್ಯವಾಗಿ ಎಲ್ಲ ಪತ್ರಿಕೆಗಳ ಮೇಲೆ
ಒಂದು ಆಣೆ ಆಗಿದ್ದರೆ ಸದಾನಂದರು
ಅತೀ ಕಡಿಮೆ ಬೆಲೆಯಲ್ಲಿ ಅಂದರೆ
6 ಕಾಸಿಗೆ ಪತ್ರಿಕೆಯ ಬೆಲೆಯನ್ನು ನಿಗದಿಸಿದ್ದರು. ಪ್ರಿ
ಪ್ರೆಸ್ ಜರ್ನಲ್ದ ಮೂಲಕ
ಸದಾನಂದರವರು ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸುವ ಕಾರ್ಯ ಮಾಡಿದರು. ಸದಾನಂದರವರಿಗೆ ಕಾಂಗ್ರೆಸ್ನ ಬೆಂಬಲವಿದ್ದ ಕಾರಣ
ಬ್ರಿಟಿಷ ಸರ್ಕಾರ ಪ್ರಿ ಪ್ರೆಸ್
ಜರ್ನಲ್ನ್ನು ವಿರೋಧಿಸುತ್ತಿದ್ದರು.
ಇದರ ಪರಿಣಾಮವಾಗಿ ಅನವಶ್ಯಕ ಆರೋಪ ಹೊರಿಸಿ
ಪ್ರ ಪ್ರೆಸ್ ಜರ್ನಲ್ನ
ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ನಂತರ
ಸರ್ಕಾರದಲ್ಲಿ 70,000 ರೂಪಾಯಿಗಳ ಠೇವಣಿ ಕೂಡಾ ಇಡಬೇಕಾದ
ಪರಿಸ್ಥಿತಿ ಎದುರಿಸಬೇಕಾಯಿತು.
ಸದಾನಂದರ ಪ್ರಿ ಪ್ರೆಸ್
ಜರ್ನಲ್ನ ಪ್ರಮುಖ ಆಕರ್ಷಣೆ
ಎಂದರೆ ಅದರ ಸಂಪಾದಕೀಯ. ಜನಸಾಮಾನ್ಯರ ಬದುಕಿಗೆ ಸಂಭಂದಪಟ್ಟ ವಿಷಯಗಳೊಮದಿಗೆ
ಜನಪ್ರಿಯವಾಗಿತ್ತು. 1920ರಲ್ಲಿ
ಬರ್ಮಾದಲ್ಲಿಯೂ ಕೂಡಾ ಪತ್ರಿಕಾ ವ್ಯವಸಾಯ
ಮಾಡಿದ ಕೀರ್ತಿ ಸದಾನಂದರವರದು.
1932ರಲ್ಲಿ ಡಾ.ಪಿ.ವರದರಾಜುಲು
ನಾಯಿಡು ಅವರಿಂದ “ಇಂಡಿಯನ್ ಎಕ್ಸಪ್ರೆಸ್”
ಪತ್ರಿಕೆಯನ್ನು ಖರಿದಿಸಿದರು. ಅದೇ
ಅವದಿಯಲ್ಲಿ “ನವಭಾರತ” ಎನ್ನುವ ಗುಜರಾತಿ
ಪತ್ರಿಕೆಯನ್ನು ಕೂಡಾ ನಡೆಸುತ್ತಿದ್ದರು.
1934ರಲ್ಲಿ “ನವಶಕ್ತಿ” ಎನ್ನುವ ಮರಾಠಿ ಪತ್ರಿಕೆಯನ್ನು
ಆರಂಭಿಸಿದರು. ಈ
ಪತ್ರಿಕೆ ಈಗಲೂ ಕೂಡಾ ಮುಂಬೈಯಿಂದಲೇ
ಪ್ರಕಟಗೊಳ್ಳುತ್ತಿದೆ. ನವಶಕ್ತಿಯ
ಪ್ರಸರಣ ಸಂಖ್ಯೆ 83,910 ಇದೆ. ಪ್ರಸ್ತುತ
ಈ ಪತ್ರಿಕೆಯನ್ನು ಇಂಡಿಯನ್
ನ್ಯಾಷನಲ್ ಪ್ರೆಸ್ ನಡೆಸುತ್ತಿದೆ.
ಕಲ್ಕತ್ತಾದಿಂದ “ಪ್ರಿ ಇಂಡಿಯಾ ಪತ್ರಿಕೆ”ಯನ್ನು ಪ್ರಾರಂಭಿಸಿದರು.
1846ರ ನ್ಯೂಯಾರ್ಕ್ನ “ಅಸೋಸಿಯೆಟೆಡ್ ಪ್ರೆಸ್”
ವಾರ್ತಾ ಸಂಸ್ಥೆಗೆ ಸ್ಪರ್ಧಿಯಾಗಿ “ಪ್ರಿ ಪ್ರೆಸ್ ಜರ್ನಲ್”ನ್ನು 1927ರಲ್ಲಿ ಪ್ರಾರಂಭಿಸಿದರು.
ಭಾರತೀಯ ನಿರ್ವಹಣೆ ಮತ್ತು ಮಾಲಿಕತ್ವ ಹೊಂದಿದ
ಭಾರತದ ಪ್ರಪ್ರಥಮ ಸುದ್ದಿ ಸಂಸ್ಥೆ ಎಂಬ
ಕೀರ್ತಿ ಪ್ರಿ ಪ್ರೆಸ್ ಜರ್ನಲ್
ಪಡೆದುಕೊಂಡಿದೆ. ರಾಷ್ಟ್ರೀಯ
ಸುದ್ದಿಗಳನ್ನು ಮುಖ್ಯವಾಗಿರಿಸಿಕೊಂಡು ಇತರ ಸುದ್ದಿಗಳನ್ನು ಭಾರತೀಯ
ಪತ್ರಿಕೆಗಳಿಗೆ ಸರಬರಾಜು ಮಾಡುವುದೇ ಈ
ಸುದ್ದಿ ಸಂಸ್ಥೆಯ ಮೂಲ ಉದ್ದೇಶವಾಗಿತ್ತು. ಆದರೆ
ಈ ಸುದ್ದಿ ಸಂಸ್ಥೆಗೆ
ಭಾರತೀಯ ಪತ್ರಿಕೆಗಳಿಂದ ಸೂಕ್ತ ಬೆಂಬಲ ದೊರೆಯದಿದ್ದ
ಕಾರಣ 1935ರಲ್ಲಿ ಸ್ಥಗಿತಗೊಂಡಿತು.
Super
ಪ್ರತ್ಯುತ್ತರಅಳಿಸಿ