ಭಾರತೀಯ ಪತ್ರಿಕಾ ಪ್ರಕಟಣೆಯ ಆರಂಭ(Early Indian Newspapers)

ವಿಲಿಯಂ ಬೋಲ್ಟ್ Photo Courtesy : Web Source ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ಪತ್ರಿಕೆಯ ಪ್ರಕಟಣಾ ಇತಿಹಾಸವನ್ನು ಅವಲೋಕಿಸಿದರೆ ವಿಲಿಯಂ ಬೋಲ್ಟ್‍ನ ಹೆಸರು ಪ್ರಪ್ರಥಮವಾಗಿ ಕೇಳಿಬರುತ್ತದೆ. ವಿಲಿಯಂ ಬೋಲ್ಟ್ ಮೂಲತಃ ವ್ಯಾಪಾರಿ ಮತ್ತು ಬ್ರಿಟೀಷ ಈಸ್ಟ್ ಇಂಡಿಯಾ ಕಂಪನಿಯ ಉದ್ಯೋಗಿಯಾಗಿದ್ದನು. ಈತ ತನ್ನ “ಕನ್ಸಿಡರೇಷನ್ಸ್ ಆನ್ ಇಂಡಿಯಾ ಅಫೇರ್ಸ್” ಪುಸ್ತಕದಿಂದ ಹೆಚ್ಚು ಪ್ರಖ್ಯಾತನು. ಈ ಪುಸ್ತಕದಲ್ಲಿ ಬೆಂಗಾಲ್‍ನ ಮೂಲ ಮತ್ತು ಪ್ಲಾಸಿ ಕದನ-1757ರ ತರುವಾಯ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಬೆಂಗಾಲ್‍ನ್ನು ಯಾವ ರೀತಿ ಅಸ್ತ್ರವಾಗಿಸಿಕೊಂಡರು ಮತ್ತು ಬೆಂಗಾಲ್‍ನಲ್ಲಿ ಬ್ರಿಟೀಷರ ಆಡಳಿತದ ಸ್ವರೂಪವನ್ನು ವಿವರಿಸುತ್ತಾನೆ. ಅದು ಕ್ರಿ.ಶ. 1776 ಸೆಪ್ಟೆಂಬರ್‍ನಲ್ಲಿ ಕಲ್ಕತ್ತಾದ “ಕೌನ್ಸಿಲ್ ಹೌಸ್”ನ ಹೆಬ್ಬಾಗಿಲಿನ ಮೇಲೆ ಈ ರೀತಿಯಾದ ಒಂದು ಸೂಚನಾ ಪತ್ರವನ್ನು ಅಂಟಿಸಲಾಗಿತ್ತು: Council House Street Photo Courtesy : Web Source “ಸಾರ್ವಜನಿಕರಲ್ಲಿ ವಿನಂತಿ, ಈ ನಗರದಲ್ಲಿ ಮುದ್ರಣಾಲಯವಿಲ್ಲದೆ ಇರುವುದರಿಂದ ವ್ಯಾಪಾರಸ್ಥರಿಗೆ ಮತ್ತು ಇತರ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿರುವುದನ್ನು ಮನಗಂಡು, ವಿ.ಬೋಲ್ಟ್ ಎಂಬುವರು ಜನರಿಗೆ ತಿಳಿಸಲು ಈ ವಿಧಾನವನ್ನು ಅನುಸರಿಸಿದ್ದಾರೆ. ಪ್ರತಿಯೊಬ್ಬ ಬ್ರಿಟ...