ಭಾರತೀಯ ಮುದ್ರಣ ಮಾಧ್ಯಮದ ಬೆಳವಣಿಗೆ (Development of Printing in India)
ಮಾನವನ ಪ್ರಮುಖ ಆವಿಷ್ಕಾರಗಳಲ್ಲಿ
ಮುದ್ರಣ ಕೂಡಾ ಒಂದು. ಪ್ರಸ್ತುತ ಮುದ್ರಣ ತಂತ್ರಜ್ಞಾನವು ಅತ್ಯುನ್ನತವಾದ
ಆಧುನಿಕ ಆವಿಷ್ಕಾರಗಳಿಂದ ಬದಲಾವಣೆ ಕಂದು ನಿಯಮಿತವಾಗಿ,
ನಿರಂತರವಾಗಿ ಅವಷ್ಯಕತೆಗೆ ತಕ್ಕಂತೆ ಮುದ್ರಣ ಮಾಧ್ಯಮದ
ವಿಶಿಷ್ಟ ಯಂತ್ರಗಳು ಪ್ರಸ್ತುತ ಲಭ್ಯ ಇವೆ. ಆದರೆ ಇತಿಹಾಸವನ್ನು ತಿರುಚಿದಾಗ
ಅದರ ಬೆಳವಣಿಗೆ ನಿಜಕ್ಕೂ ಆಶ್ಚರ್ಯಕರ ವಿಷಯಗಳನ್ನು
ಸ್ಪಷ್ಟಪಡಿಸುತ್ತದೆ. ಈ
ಮುದ್ರಣವು ಕಲೆಯೂ ಹೌದು ಹಾಗು
ವಿಜ್ಞಾನವು ಹೌದು. ಅಕ್ಷರ, ಚಿತ್ರಗಳನ್ನು
ಶಾಯಿಯ ಸಹಾಯದಿಂದ ಕಾಗದಗಳ ಮೇಲೆ ಮುದ್ರಿಸುವಂತಹ
ಪ್ರಕ್ರೀಯೆ ಮುದ್ರಣ. ಮುದ್ರಣ ಕಾಗದದ
ಮೇಲೆ ಮಾತ್ರವಲ್ಲ ಇನ್ನೂ ಹಲವಾರು ವಿವಿಧ
ವಸ್ತುಗಳ ಮೇಲೂ ಪ್ರಸ್ತುತ ಬಳಸಲಾಗುತ್ತಿದೆ.
ಇಂತಹ ಮುದ್ರಣಕ್ಕೆ ಬಳಸುವ ಯಂತ್ರವನ್ನು ನಾವು
ಮುದ್ರಣ ಯಂತ್ರ ಎನ್ನುತ್ತೇವೆ.
ಮೂಲ ಪ್ರತಿಯನ್ನು ಹಲವಾರು ಪ್ರತಿಗಳನ್ನಾಗಿಸಲು ಈ
ಮುದ್ರಣ ತಂತ್ರಜ್ಞಾನ ಸಹಾಯಕವಾಗಿದೆ.
ಮುದ್ರಣದ
ಇತಿಹಾಸ(History
of Printing)
Photo Courtesy : Web Source
ಚೀನಾದ ಅಚ್ಚು
ಮುದ್ರಣ(Block
Printing in China)
ಜಗತ್ತಿಗೆ ಮುದ್ರಣ ಕಲೆಯನ್ನು ಪರಿಚಯಿಸಿದ
ಕೀರ್ತಿ ಚೀನಾಗೆ ಸಲ್ಲುತ್ತದೆ.
ಅಕ್ಷರ ಮತ್ತು ಚಿತ್ರಗಳನ್ನು ಮುದ್ರಿಸಲ
ಕಟ್ಟಿಗೆಯ ಅಚ್ಚುಗಳನ್ನು ತಯಾರಿಸಿ ಅವುಗಳನ್ನು ಹಾಳೆಗಳ
ಮೇಲೆ ತಾಮ್ರದ ಪದರಗಳ ಮೇಲೆ
ಒತ್ತಲಾಗುತ್ತಿತ್ತು. ಈ
ಕಲೆ ಚೀನಾದ ತಾಂಗ್ ಸಾಮ್ರಾಜ್ಯ(Tang Dynasty: ಕ್ರಿ.ಶ.618-907)ದಲ್ಲಿ
ಪ್ರಥಮವಾಗಿ ಕಂಡುಬಂತು. 6 ಮತ್ತು
7ನೇ ಶತಮಾನದಲ್ಲಿಯೇ ಚೀನಿಯರು ಈ ಮುದ್ರಣ
ತಂತ್ರವನ್ನು ಬಳಸುತ್ತಿದ್ದರು ಎನ್ನುವ ದಾಖಲೆಗಳಿವೆ.
ಕ್ರಿ.ಶ.868ರಲ್ಲಿ “ಹೀರಾ
ಸೂತ್ರ” ಎಂಬ ಪುಸ್ತಕವನ್ನು ಪ್ರಪ್ರಥಮವಾಗಿ
ಮುದ್ರಿಸಿದವರು ಚೀನಿಯರು. ಇದು
ಮೂಲತಃ ಸಂಸ್ಕøತದ “ಪ್ರಜ್ಞಾ
ಪರಿಮಿತ ಸೂತ್ರ” ಬೌದ್ಧರ ಗ್ರಂಥವಾಗಿದೆ. ಇದಕ್ಕೆ
“ವಜ್ರ ಸೂತ್ರ” ಎಂತಲೂ ಕರೆಯುವರು. ಇದನ್ನು
‘ವಾಂಗ್ ಜೀ’ 868ರಲ್ಲಿ ಮುದ್ರಿಸಿದನು.
Photo Courtesy : Web Source
ಕ್ರಿ.ಶ. 869ರಲ್ಲಿ
“ವಾಂಗ್ ಚೆಕ್” ಎನ್ನುವ ಗ್ರಂಥ
ಮುದ್ರಣವಾಯಿತು. ಕ್ರಿ.ಶ.1023ರಲ್ಲಿ ಸಾಂಗ್
ಸಾಮ್ರಾಜ್ಯ(Song Dynasty:ಕ್ರಿ.ಶ.960-1276) ಕಾಲ
ವಿಶ್ವದ ಪ್ರಪ್ರಥಮ ನೋಟು ಮುದ್ರಣವನ್ನು ಪರಿಚಯಿಸಿದ
ಸಾಮ್ರಾಜ್ಯ. ಈ
ನೋಟುಗಳನ್ನು ಮುದ್ರಿಸಲು ಮುದ್ರಣ ಯಂತ್ರಗಳನ್ನು ಬಳಸಿರುವುದನ್ನು
ಅಚ್ಚರಿಯ ವಿಷಯ. ಇದಕ್ಕೂ
ಮುಂಚೆ ತಾಂಗ್ ಸಾಮ್ರಾಜ್ಯದಲ್ಲಿ ವ್ಯಾಪಾರ-ವ್ಯವಹಾರದ ಅನುಕೂಲಕ್ಕಾಗಿ ತಾಮ್ರದ ಬಿಲ್ಲೆಗಳನ್ನು ಹಣವನ್ನಾಗಿ
ಬಳಸಲಾಗುತ್ತಿತ್ತು. ನೋಟು
ಮುದ್ರಣಕ್ಕಾಗಿ “ಮಲ್ವರಿ ಗಿಡದ ತೇಳುವಾದ
ಪದರವನ್ನು ಬಳಸಲಾಗುತ್ತಿತ್ತು. ಈ
ಅವಧಿಯಲ್ಲಿ ಸಂಖ್ಯೆಗಳ ಮುದ್ರಣಕ್ಕಾಗಿ ತಾಮ್ರದ ಚೆಕ್ಕೆಗಳನ್ನು ಬಳಸುತ್ತಿದ್ದರು. ಪ್ರಸ್ತುತ
ಕೂಡಾ ಸಾಂಗ್ ಸಾಮ್ರಾಜ್ಯದ ನೋಟು
ಮತ್ತು ಹಣದ ಬಿಲ್ಲೆಗಳ ಪ್ರತಿಗಳು
ಲಂಡನ್ನ “ಬ್ರಿಟೀಷ್ ಮ್ಯೂಸಿಯಂ”ನಲ್ಲಿ ಕಾಣಬಹುದು. ನಂತರದ ‘ಜಿನ್ ಸಾಮ್ರಾಜ್ಯ(Jin Dynasty:1115-1234) ಕಾಲದಲ್ಲಿ
ಕ್ರಿ.ಶ.1215ರಲ್ಲಿ ಸರಕಾರಿ
ದಾಖಲೆಗಳಿಗಾಗಿ ಮುದ್ರಣವನ್ನು ಬಳಸಿದ ಕುರುಹುಗಳನ್ನು ಕಾಣಬಹುದಾಗಿದೆ. ಪ್ರಸ್ತುತ
ಜಪಾನನ ಟೊಕಿಯೋದ ಮ್ಯೂಸಿಯಂನಲ್ಲಿ ಈ
ಪ್ರಾಚೀನ ಮುದ್ರಣದ ಪ್ರತಿಗಳನ್ನು ನೋಡಬಹುದಾಗಿದೆ.
Photo Courtesy : Web Source
ಯೂರೋಪನಲ್ಲಿ ಮುದ್ರಣ(Printing
in Europe)
ಚೀನಾದ ಮುದ್ರಣ ಆವಿಷ್ಕಾರದ
ನಂತರ ವಿಶ್ವದ ಎಲ್ಲಾ ಮೂಲೆಗಳಿಗೂ
ಈ ಮುದ್ರಣ ತಂತ್ರ
ವಿಸ್ತರಣೆಯಾಗಿ ಹರಡಿಕೊಂಡಿತು. ಕ್ರಿ.ಶ. 1300ರ ಸಮಯದಲ್ಲಿ
ಮುದ್ರಣ ಸರ್ವೆ ಸಾಮಾನ್ಯವಾಗಿತ್ತು.
ಕ್ರಿ.ಶ. 1400ರವರೆಗೆ ಅಂದರೆ
ಕಾಗದ ಸುಲಭವಾಗಿ ಲಭ್ಯವಾಗುವವರೆಗೆ ಬಟ್ಟೆಗಳ ಮೇಲೆ ಮುದ್ರಣ
ಮಾಡಲಾಗುತ್ತಿತ್ತು. ಆದರೆ
ಹೆಚ್ಚಾಗಿ ಧಾರ್ಮಿಕ ವಿಷಯಗಳನ್ನು ಮುದ್ರಿಸಲು
ಬಟ್ಟೆಗಳನ್ನು ಬಳಸಲಾಗುತ್ತಿತ್ತು. ಕ್ರಿ.ಶ. 1425ರ ನಂತರ
ಧಾರ್ಮಿಕ ಚಿತ್ರಗಳನ್ನು ಮತ್ತು ಆಟದ ಎಲೆ(Playing Cards)ಗಳನ್ನು
ಹೆಚ್ಚಾಗಿ ಮುದ್ರಿಸಲಾಗುತ್ತಿತ್ತು. ವಿಶ್ವದ
ಪ್ರಪ್ರಥಮ ಚಲನಾತ್ಮಕ ಲೋಹದ ಮುದ್ರಣ ಕೋರಿಯಾದ
‘ಗೋರಿಯೋ ಸಾಮ್ರಾಜ್ಯ(Goryeo/Koryo Dynasty:918-1392)ದಲ್ಲಿ ಕಾಣುತ್ತೇವೆ.
ಇದಕ್ಕೆ ಸಾಕ್ಷಿ ಕ್ರಿ.ಶ.1234
ಕಾಲದಲ್ಲಿ ‘ಚ್ವೆ-ಯುನ್-ಯೀ’
ಮುದ್ರಿಸಿದ “ಜಿಕ್ಜಿ” ಗ್ರಂಥ. ಈ ಮುದ್ರಿತ ಪ್ರತಿ
ಪ್ರಸ್ತುತ ವಾಷಿಂಗ್ಟನ್ನ
‘ಲೈಬ್ರರಿ ಆಫ್ ಕಾಂಗ್ರೆಸ್’ ಗ್ರಂಥಾಲಯದಲ್ಲಿ
ಲಭ್ಯವಿದೆ. ನಂತರದ
‘ಬಿ-ಶೇಂಗ್’ 1301ರಲ್ಲಿ ಆವಿಷ್ಕರಿಸಿದ ಅಚ್ಚು
ಮೋಳೆ ಯಂತ್ರವನ್ನು ಇಲ್ಲಿ ಸ್ಮರಿಸುವುದು ಮರೆಯುವಂತಿಲ್ಲ.
Photo Courtesy : Web Source
ನಂತರ ಯೂರೋಪ್ನ
ಆಧುನಿಕ ಚಲಿಸುವ ಮುದ್ರಣ ಯಂತ್ರಗಳನ್ನು
ಪರಿಚಯಿಸಿದ ಕೀರ್ತಿ “ಜೋಹಾನ್ಸ್ ಗುಟೇನ್ಬರ್ಗ್”ಗೆ ಸಲ್ಲುತ್ತದೆ. ಕ್ರಿ.ಶ.1440ರಲ್ಲಿ ಪ್ರಪ್ರಧಮವಾಗಿ
ಆಧುನಿಕ ಮುದ್ರಣ ಯಂತ್ರವನ್ನು ಪರಿಚಯಿಸಿದನು. ಗುಟೇನ್ಬರ್ಗ್ನ ಜೊತೆ
ಜೋಹಾನ್ ಫಸ್ಟ್ ಮತ್ತು ಪೀಟರ್
ಸ್ಕಾಫರ್ರು ಆಧುನಿಕ ಚಲಿಸುವ
ಯಂತ್ರಗಳಿಗಾಗಿ ಶ್ರಮಿಸಿದವರು. ಪ್ರಪ್ರಥಮವಾಗಿ
ಎಣ್ಣೆ ಮಿಶ್ರಿತ ಶಾಯಿಯನ್ನು ಪರಿಚಯಿಸಿದ
ಕೀರ್ತಿ ಕೂಡಾ ಗುಟೇನ್ಬರ್ಗ್ಗೆ ಸಲ್ಲುತ್ತದೆ.
ಭಾರತದಲ್ಲಿ ಮುದ್ರಣ(Printing
in India)
![]() |
ಗೋವಾದ ಮುದ್ರಣ ಯಂತ್ರ Photo Courtesy : Web Source |
ವಿಶ್ವದ ಮುದ್ರಣದ ಇತಿಹಾಸ
ಇಷ್ಟು ವಿಶೇಷವಾದರೇ, ಭಾರತದ ಮುದ್ರಣದ ಇತಿಹಾಸ
ಇನ್ನೂ ವಿಶೇಷ ಮತ್ತು ಆಶ್ಚರ್ಯಕರವಾಗಿದೆ. ಪ್ರಪ್ರಥಮವಾಗಿ
ಅಬೆಸೀನಿಯಾದಿಂದ ಗೋವಾಕ್ಕೆ ಸೆಪ್ಟೆಂಬರ್ 6, 1556ರಂದು ಮುದ್ರಣ ಯಂತ್ರ
ಪಾದಾರ್ಪನೆ ಮಾಡಿತು. ಹದಿನಾಲ್ಕು
ಜನ ಕ್ರೈಸ್ತ ಧರ್ಮ ಪ್ರಚಾರಕರು
ಧರ್ಮ ಪ್ರಚಾರಕ್ಕಾಗಿ ಮುದ್ರಣ ಯಂತ್ರವನ್ನು ಭಾರತಕ್ಕೆ
ತಂದರು. ಇದನ್ನು
ವಿಶೇಷವಾಗಿ ಧರ್ಮಪ್ರಚಾರಕ್ಕೆಂದೆ ರೂಪಿಸಲಾಗಿತ್ತು. ಇನ್ನೊಂದು
ವಿಶೇಷವೆಂದರೆ, ಭಾರತದಲ್ಲಿ ಭಾರತೀಯರಿಗಾಗಿ ಪೋರ್ಚುಗೀಸ್ನ ‘ಜಾನ್ ಈ’
ಭಾರತೀಯ ಶಾಲೆಯನ್ನು ಪ್ರಾಂರಭಿಸಿದ್ದನು. ಅದು
1542ರ ಕಾಲ ತೆಮಿಳುನಾಡಿನ ಟ್ರಾಂಕ್ಯುಬಾರ್ನ ತರಂಗಬಾಡಿಯಲ್ಲಿ ಭಾರತೀಯರಿಗೆ
ಪ್ರಾನ್ಸಿಸ್ ಗ್ಸೇವಿಯರ್ ಬೈಬಲ್ ಬೋಧನೆ ಮಾಡುತ್ತಿದ್ದ. ವಿದ್ಯಾರ್ಥಿಗಳಿಗೆ
ಪುಸ್ತಕಗಳನ್ನು ಒದಗಿಸುವ ಅವಶ್ಯಕತೆ ಇರುವುದರಿಂದ
ಪ್ರಾನ್ಸಿಸ್ ಗ್ಸೇವಿಯರ್ ಪೋರ್ಚುಗಿಸ್ ರಾಜನಿಗೆ ಮುದ್ರಣ ಯಂತ್ರವನ್ನು
ಒದಗಿಸಲು ಬೇಡಿಕೆ ಇಟ್ಟಿದ್ದನು.
ಅದೇ ಸಮಯದಲ್ಲಿ ಇಥಿಯೋಪಿಯಾದ ರಾಜ ಕೂಡಾ ಪ್ರಚಾರಕರ
ಜೋತೆ ಮುದ್ರಣ ಯಂತ್ರವನ್ನು ಒದಗಿಸಲು
ಬೇಡಿಕೆ ಇಟ್ಟಿದ್ದನು. ಆದರೇ,
ಇಥಿಯೋಪಿಯಾ ರಾಜನ ಬೇಡಿಕೆಯನ್ನು ಮೊದಲು
ಸ್ವಿಕೃತಿಯಾಗಿ ಮಾರ್ಚ 29, 1556ರಲ್ಲಿ ಮೊದಲು ಮುದ್ರಣ
ಯಂತ್ರ ಇಥಿಯೋಪಿಯಾಗೆ ಹೊರಟಿತು. ಸೆಪ್ಟೆಂಬರ್
6, 1556ಕ್ಕೆ ಮುದ್ರಣಯಂತ್ರ ಗೋವಾ ತಲುಪಿತು. ಆದರೆ ಇಥಯೋಪಿಯಾದ ರಾಜ
ಮುದ್ರಣ ಯಂತ್ರದ ಮೇಲೆ ಅದೇ
ಆಸಕ್ತಿ ಇಲ್ಲದ ಕಾರಣ ಅದು
ಗೋವಾದಲ್ಲಿಯೇ ಉಳಿಯಬೇಕಾಯಿತು. ಅಲ್ಲಿನ
ವಿದ್ಯಾರ್ಥಿಗಳಿಗೆ ಈ ಯಂತ್ರದಿಂದ 1557ರಲ್ಲಿ
ಪೋರ್ಚುಗಿಸ್ನಲ್ಲಿ ‘ದೌತ್ರಿನಾ ಕ್ರೈಸ್ತ’
ಎಂಬ ಮೊದಲ ಗ್ರಂಥವನ್ನು ಮುದ್ರಿಸಲಾಯಿತು. ಇದು
ಮಕ್ಕಳಿಗಾಗಿ ಇರುವ ಪ್ರಾನ್ಸಿಸ್ ಗ್ಸೇವಿಯರ್ನ ಕೃತಿಯಾಗಿತ್ತು.
ಭಾರತೀಯ ಭಾಷೆಯಲ್ಲಿ ಅಚ್ಚು ಮೊಳೆಗಳನ್ನು ತಯಾರಿಸಿದ
ಕೀರ್ತಿ ಸ್ಪೇನ್ನ ಜಾವಗನ್
ಸ್ಟ್ಯಾಲಿನ್ಗೆ ಸಲ್ಲುತ್ತದೆ.
1578ರಲ್ಲಿ ತಮಿಳು ಭಾಷೆಯಲ್ಲಿ ಪ್ರಾನ್ಸಿಸ್
ಗ್ಸೇವಿಯರ್ನ “ದೌತ್ರಿನಾ ಕ್ರೈಸ್ತ”
ಗ್ರಂಥವನ್ನು ತಮಿಳು ಭಾಷೆಯಲ್ಲಿ ಮುದ್ರಿಸಲಾಯಿತು.
![]() |
Photo Courtesy : Web Source |
ಈ ಅವಧಿಯಲ್ಲಿ ಗೋವಾದ
ಮುದ್ರಣಯಂತ್ರವನ್ನು ಕೇವಲ ಧರ್ಮ ಪ್ರಚಾರಕ್ಕಾಗಿ
ಮಾತ್ರ ಬಳಸಲಾಗುತ್ತಿತ್ತು. ನಂತರ
1578ರಲ್ಲಿ ಭಾರತದ ಎರಡನೇಯ ಮುದ್ರಣಾಲಯ
ತಿರುನಳವೆಳ್ಳಿಯ ‘ಪುನಿಕೇನ್ ಮತ್ತು ಫಿಷರಿಕೋಸ್ಟ್’ನಲ್ಲಿ
ಸ್ಥಾಪಿಸಲಾಯಿತು. 1640ರಲ್ಲಿ
ಪ್ರಪ್ರಥಮ ಕೊಂಕನಿ ವ್ಯಾಕರಣ ಗ್ರಂಥವನ್ನು
ಫಾದರ್ ಥಾಮಸ್ ಸ್ಟೆಫನ್ಸ್ ಮತ್ತು
1626ರಲ್ಲಿ ಎರಡು ಸಂಪುಟಗಳ ಕೊಂಕಣಿ
ಶಬ್ದಕೋಶವನ್ನು ಡಿಯಾಗೊ ರಿಬಿರೋ ಮುದ್ರಿಸಿದರು. ಈ
ಎರಡನೇಯ ಮುದ್ರಣಾಲಯವನ್ನು ಸ್ಥಾಪಿಸಿದ ಕೀರ್ತಿ ‘ಫಾದರ್ ಜಾನ್
ಡಿ’ರವರಿಗೆ ಸಲ್ಲುತ್ತದೆ.
ಮುಂದೆ 1674ರಲ್ಲಿ ‘ಬೊಂಬಾಯಿ’ಯಲ್ಲಿ
ಭಾರತದ ಮೂರನೇಯ ಮುದ್ರಣಾಲಯ ತಲೆ
ಎತ್ತುತ್ತದೆ. ಇದನ್ನು ಗುಜರಾತ್ನ
‘ಭೀಮಜೀ ಫಾರಿಖ್’ ಎಂಬುವರು ಸ್ಥಾಪಿಸಿದರು. ನವೆಂಬರ್
11, 1793ರಲ್ಲಿ ವಿಲಿಯಂ ಕ್ಯಾರಿ ಭಾರತಕ್ಕೆ
ಆಗಮಿಸಿದನು. ಭಾರತೀಯರಾದ
ಪಂಚಾನನ್ ಕರ್ಮಾಕರ ಮತ್ತು ಮನೋಹರ್
ಎಂಬುವರ ಸಹಾಯವನ್ನು ಪಡೆದು ವಿಲಿಯಂ ಕ್ಯಾರಿ
40 ಭಾರತೀಯ ಭಾಷೆಗಳನ್ನು ಮುದ್ರಿಸುವ ಅಚ್ಚುಗಳನ್ನು ತಯಾರಿಸಿದರು.
![]() |
Photo Courtesy : Web Source |
1820ರಲ್ಲಿ ವಿಲಿಯಂ ಫೈವಿ
ಎಂಬುವನು ‘ಸೂರತ ಮಿಷನ್ ಪ್ರೆಸ್’ನ್ನು ಗುಜರಾತನಲ್ಲಿ(ಇದು
ಬೆಂಗಾಲ್ನ ಮೊದಲ ಪ್ರೇಸ್),
1821ರಲ್ಲಿ ಬೆಂಜಮಿನ್ ಬೈಲಿ ಕೇರಳದ ಕೊಟ್ಟೆಯಂನಲ್ಲಿ,
1838ರಲ್ಲಿ ನಾಥನ್ ಬ್ರೋನ್, ಆಲಿವರ್
ಕಟ್ಟರ್ ಮತ್ತು ಮೈಲ್ಸ್ ಬ್ರೋನ್ಸ್ನ್ರು ಆಸ್ಸಾಂನ
ಸಾಡಿಯಾದಲ್ಲಿ ಮತ್ತು ಅದೇ ವರ್ಷ
ಕೇರಳದ ತಲಸ್ಸೇರಿಯಲ್ಲಿ ಹರ್ಮನ್ ಗುಂಡರ್ಟ್ ಮಲಯಾಲಂ
ಪ್ರಕಟಣೆಗೆ ಚಾಲನೆ ಕೊಟ್ಟರು.
1971ರಲ್ಲಿ ಮದ್ರಾಸ್ನಲ್ಲಿ ಮುದ್ರಣ
ಪ್ರಾರಂಭವಾಯಿತು. ಈ
ರೀತಿಯಾಗಿ ಭಾರತದ ವಿವಿಧ ಭಾಗಗಳಲ್ಲಿ
ಮುದ್ರಣ ವಿಸ್ತರಿಸಿಕೊಂಡಿತು. ಗೋವಾ ಮತ್ತು ಮದ್ರಾಸ್ಗಳಲ್ಲಿ ಧಾರ್ಮಿಕ ಪ್ರಚಾರದ
ಉದ್ದೇಶಕ್ಕಾಗಿ ಮುದ್ರಣ ಪ್ರಾರಂಭವಾದರೇ, 1977ರಲ್ಲಿ
ಬಂಗಾಳದಲ್ಲಿ ರಾಜಕೀಯ ಹಿತಾಸಕ್ತಿಗೊಸ್ಕರ ಮುದ್ರಣಾಲಯ
ಸ್ಥಾಪನೆಯಾದವು.
Photo Courtesy : Web Source |
ಕರ್ನಾಟಕದಲ್ಲಿ ಮುದ್ರಣ(Printing
in Karnataka)
ಕರ್ನಾಟಕದಲ್ಲಿಯೂ
ಕೂಡಾ ಧರ್ಮ ಪ್ರಚಾರವನ್ನು ವಿಸ್ತರಿಸಿದ
ಪ್ರಚಾರಕರು ಮೊದಲ ಮುದ್ರಣ ಯಂತ್ರವನ್ನು
ಬಳ್ಳಾರಿಯಲ್ಲಿ ಸ್ಥಾಪಿಸಿದರು. ಕನ್ನಡದಲ್ಲಿ
ಮೊದಲು ಮುದ್ರಣ ಮಾಡಿದ್ದು ವೆಸ್ಟ್
ಬೆಂಗಾಲ್ನ ಸೇರಂಪುರ್(ಶ್ರೀನಿವಾಸಪುರ)ದಲ್ಲಿ. 1817ರಲ್ಲಿ
“ಎ ಗ್ರಾಮರ್ ಆಫ್ ಕರ್ನಾಟಾ
ಲಾಂಗ್ವೇಜ್” ಎಂಬ ಕನ್ನಡ ವ್ಯಾಕರಣವನ್ನು
ಇಂಗ್ಲೀಷ್ನಲ್ಲಿ ಮುದ್ರಿಸಿದರು.
ಆದರೆ ಇದರಲ್ಲಿ ಕನ್ನಡದಲ್ಲೇ ಉದಾಹರಣೆಗಳನ್ನು
ಕೊಡಲಾಗಿತ್ತು. ಈ
ವ್ಯಾಕರಣ ಗ್ರಂಥವನ್ನು ಮುದ್ರಿಸಿದವರು ‘ವಿಲಿಯಂ ಕ್ಯಾರಿ’. ಮನೋಹರ್ ಎಂಬುವನ ಸಹಾಯವನ್ನು
ಪಡೆದು ವಿಲಿಯಂ ಕ್ಯಾರಿ ಈ
ವ್ಯಾಕರಣ ಗ್ರಂಥವನ್ನು ಯಶಸ್ವಿಯಾಗಿ ಮುದ್ರಿಸಿದನು. 1848ರಲ್ಲಿ ಕನ್ನಡದ ಜೈಮಿನಿ
ಭಾರತವನ್ನು ಮುದ್ರಿಸಲಾಯಿತು. 1850ರಲ್ಲಿ
ಬಸವ ಪುರಾಣವನ್ನು, 1851ರಲ್ಲಿ ಚನ್ನಬಸವ ಪುರಾಣ
ಮತ್ತು ದಶಪರ್ವ ಭಾರತ ಎಂಬ
ಪುಸ್ತಕಗಳನ್ನು ಮುದ್ರಿಸಲಾಯಿತು.
ಪ್ರಸ್ತುತ ಗಂಟೆಗೆ ಲಕ್ಷ್ಯಾನುಗಟ್ಟಲೆ ಪುಟಗಳನ್ನು
ಮುದ್ರಿಸುವ ಅತ್ಯಾಧುನಿಕ ಮುದ್ರಣ ತಂತ್ರಜ್ಞಾನವಿದ್ದರೂ ಈ
ಆರಂಭಿಕ ಮುದ್ರಣ ಮಾದ್ಯಮದ ಬೆಳವಣಿಗೆಯ
ತಿಳುವಳಿಕೆ ನಮಗೆ ಅವಶ್ಯಕ.
Very informative blog. Please keep posting this kind of stuff for media students like us.
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿvery hood sir. very helpful gor journalism students
ಪ್ರತ್ಯುತ್ತರಅಳಿಸಿvery hood sir. very helpful gor journalism students
ಪ್ರತ್ಯುತ್ತರಅಳಿಸಿSuper👌👌👌👌👌👌👍
ಪ್ರತ್ಯುತ್ತರಅಳಿಸಿಸೂಪರ್
ಪ್ರತ್ಯುತ್ತರಅಳಿಸಿ