ಭಾರತೀಯ ಮುದ್ರಣ ಮಾಧ್ಯಮದ ಬೆಳವಣಿಗೆ (Development of Printing in India)
ಮಾನವನ ಪ್ರಮುಖ ಆವಿಷ್ಕಾರಗಳಲ್ಲಿ ಮುದ್ರಣ ಕೂಡಾ ಒಂದು . ಪ್ರಸ್ತುತ ಮುದ್ರಣ ತಂತ್ರಜ್ಞಾನವು ಅತ್ಯುನ್ನತವಾದ ಆಧುನಿಕ ಆವಿಷ್ಕಾರಗಳಿಂದ ಬದಲಾವಣೆ ಕಂದು ನಿಯಮಿತವಾಗಿ , ನಿರಂತರವಾಗಿ ಅವಷ್ಯಕತೆಗೆ ತಕ್ಕಂತೆ ಮುದ್ರಣ ಮಾಧ್ಯಮದ ವಿಶಿಷ್ಟ ಯಂತ್ರಗಳು ಪ್ರಸ್ತುತ ಲಭ್ಯ ಇವೆ . ಆದರೆ ಇತಿಹಾಸವನ್ನು ತಿರುಚಿದಾಗ ಅದರ ಬೆಳವಣಿಗೆ ನಿಜಕ್ಕೂ ಆಶ್ಚರ್ಯಕರ ವಿಷಯಗಳನ್ನು ಸ್ಪಷ್ಟಪಡಿಸುತ್ತದೆ . ಈ ಮುದ್ರಣವು ಕಲೆಯೂ ಹೌದು ಹಾಗು ವಿಜ್ಞಾನವು ಹೌದು . ಅಕ್ಷರ , ಚಿತ್ರಗಳನ್ನು ಶಾಯಿಯ ಸಹಾಯದಿಂದ ಕಾಗದಗಳ ಮೇಲೆ ಮುದ್ರಿಸುವಂತಹ ಪ್ರಕ್ರೀಯೆ ಮುದ್ರಣ . ಮುದ್ರಣ ಕಾಗದದ ಮೇಲೆ ಮಾತ್ರವಲ್ಲ ಇನ್ನೂ ಹಲವಾರು ವಿವಿಧ ವಸ್ತುಗಳ ಮೇಲೂ ಪ್ರಸ್ತುತ ಬಳಸಲಾಗುತ್ತಿದೆ . ಇಂತಹ ಮುದ್ರಣಕ್ಕೆ ಬಳಸುವ ಯಂತ್ರವನ್ನು ನಾವು ಮುದ್ರಣ ಯಂತ್ರ ಎನ್ನುತ್ತೇವೆ . ಮೂಲ ಪ್ರತಿಯನ್ನು ಹಲವಾರು ಪ್ರತಿಗಳನ್ನಾಗಿಸಲು ಈ ಮುದ್ರಣ ತಂತ್ರಜ್ಞಾನ ಸಹಾಯಕವಾಗಿದೆ . ಮುದ್ರಣದ ಇತಿಹಾಸ (History of Printing) Photo Courtesy : Web Source ಚೀನಾದ ಅಚ್ಚು ಮುದ್ರಣ (Block Printing in China) ಜಗತ್ತಿಗೆ ಮುದ್ರಣ ಕಲೆಯನ್ನು ಪರಿಚಯಿಸಿದ ಕೀರ್ತಿ ಚೀನಾಗೆ ಸಲ್ಲುತ್ತದೆ . ಅಕ್ಷರ ಮತ್ತು ಚಿತ್ರಗಳನ್ನು ಮುದ್ರಿಸಲ ಕಟ್ಟಿಗೆಯ ಅಚ್ಚುಗ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ